Ahmed Kabeer
live cricket
Video for those who missed: Virender Sehwag 219 (149) vs West Indies, 4th ODI
suvarna live
NAMMA TV live
watch bol movie
Thursday, December 8, 2011
Video for those who missed: Virender Sehwag 219 (149) vs West Indies, 4th ODI
<iframe width="560" height="315" src="http://www.youtube.com/embed/ZLwB0r8hDI8" frameborder="0" allowfullscreen></iframe>
Tuesday, October 25, 2011
Sunday, October 23, 2011
Friday, October 21, 2011
ಅಮೆರಿಕನ್ ಸಾಮ್ರಾಜ್ಯಶಾಹಿಗೆ ಗದಾಫಿ ಬಲಿ
ಲಿಬಿಯದ ನಾಯಕ ಮುಅಮ್ಮರ್ ಗದಾಫಿ ನ್ಯಾಟೋ ಪಡೆಯ ಕೈಗೊಂಬೆಗಳ ಗುಂಡೇ ಟಿಗೆ ಬಲಿಯಾಗಿದ್ದಾರೆ. ಈ ಸಾವು ಅವರಿಗೆ ಅನಿರೀಕ್ಷಿತವಾಗಿರಲಿಲ್ಲ. ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್‌ರ ಪತನವಾದಾಗಲೇ ಮುಂದಿನ ಬಲಿ ಲಿಬಿಯ ಎಂದು ಗದಾಫಿಗೆ ಗೊತ್ತಿತ್ತು. ಆದರೂ ಆತ ಸಾಮ್ರಾಜ್ಯಶಾಹಿ ಶಕ್ತಿಗಳ ಜೊತೆ ರಾಜಿ ಮಾಡಿಕೊಳ್ಳದೆ ಸಾವನ್ನು ಆಹ್ವಾನಿಸಿಕೊಂಡಿದ್ದಾರೆ. ಕೊಲ್ಲಿ ದೇಶಗಳ ತೈಲ ಸಂಪತ್ತಿನ ಮೇಲೆ ಕಣ್ಣಿರಿಸಿದ್ದ ಅಮೆರಿಕನ್ ಸಾಮ್ರಾಜ್ಯಶಾಹಿ ಮುಂಚಿನಿಂದಲೂ ಆ ಸಂಪನ್ಮೂಲವನ್ನು ಲಪಟಾಯಿಸಲು ಹುನ್ನಾರ ನಡೆಸುತ್ತಲೇ ಬಂದಿದೆ. ಇರಾಕ್‌ನ ಸದ್ದಾಂ ಹುಸೇನ್‌ರಂತೆಯೇ ಲಿಬಿಯದ ಗದಾಫಿ ಕೂಡ ಈ ಹುನ್ನಾರಕ್ಕೆ ಸೊಪ್ಪು ಹಾಕಲಿಲ್ಲ.ತನ್ನ ದೇಶದ ತೈಲ ಸಂಪತ್ತು ತಮ್ಮ ಜನತೆಗೆ ಸೇರಿದ್ದು ಎಂದು ಗದಾಫಿ ಪ್ರತಿಪಾದಿಸಿದರು. ಆ ತೈಲ ಸಂಪತ್ತಿನಿಂದ ಬಂದ ಆದಾಯವನ್ನು ಬಳಸಿ ಕೊಂಡು ಸಾಕಷ್ಟು ಜನ ಕಲ್ಯಾಣ ಕಾರ್ಯ ಕ್ರಮಗಳನ್ನು ಅವರು ರೂಪಿಸಿದ್ದರು. ಆದರೂ 42 ವರ್ಷ ಕಾಲ ತಾನೇ ದೇಶದ ಅಕಾರ ಸೂತ್ರ ಹಿಡಿದದ್ದು ಒಂದೇ ಅವರ ದೌರ್ಬಲ್ಯ ವಾಗಿತ್ತು. ಗದಾಫಿಯ ಈ ಇರುವನ್ನು ಆಂಗ್ಲೋ ಅಮೆ ರಿಕನ್ ಸಾಮ್ರಾಜ್ಯಶಾಹಿಗಳು ಸಹಿಸಲಿಲ್ಲ. ಜಗತ್ತಿನ ಎಲ್ಲ ದೇಶಗಳಲ್ಲೂ ತಮ್ಮ ಕೈಗೊಂಬೆ ಸರಕಾರಗಳೇ ಅಸ್ತಿತ್ವದಲ್ಲಿರ ಬೇಕೆಂದು ಮುಂಚಿನಿಂದಲೂ ಮಸಲತ್ತು ನಡೆಸುತ್ತಾ, ಈ ದುಷ್ಟ ಶಕ್ತಿಗಳು ತಮಗೆ ಶರಣಾಗದ ಎಲ್ಲರನ್ನೂ ನಿರ್ದಯವಾಗಿ ಹೊಸಕಿ ಹಾಕುತ್ತಲೇ ಬಂದಿವೆ. ಇಂಡೋನೇಶ್ಯದ ಸುಖರ್ನೋ ಮತ್ತು ಚಿಲಿಯ ಅಲೆಂಡೆಯವರನ್ನು ಇದೇ ರೀತಿ ನೇರ ಹಸ್ತಕ್ಷೇಪ ಮಾಡಿ ಅಮೆರಿಕ ಬಲಿ ತೆಗೆದು ಕೊಂಡಿತು. ಬಾಂಗ್ಲಾದೇಶದ ಗಾಂ ಎಂದೇ ಹೆಸರಾಗಿದ್ದ ವಂಗ ಬಂಧು ಶೇಕ್ ಮುಜಿಬುರ್ ರೆಹಮಾನ್‌ರನ್ನು ಕೂಡ ಕರಾಳ ಶಕ್ತಿಗಳು ಇದೇ ರೀತಿ ಕೊಚ್ಚಿ ಹಾಕಿದ್ದವು.ಇರಾಕ್‌ನ ಮೇಲೆ ದಾಳಿಗೆ ನೆಪ ಹುಡು ಕುತ್ತಿದ್ದ ಅಮೆರಿಕ ಆ ದೇಶದಲ್ಲಿ ಅಣ್ವಸಗಳ ರಹಸ್ಯ ಪ್ರಯೋಗ ನಡೆದಿದೆ ಎಂದು ಆರೋಪಿಸಿತು. ತನ್ನ ಕೈಗೊಂಬೆಯಂತಿರುವ ಸಂಯುಕ್ತ ರಾಷ್ಟ್ರ ಸಂಸ್ಥೆಯನ್ನು ಬಳಸಿಕೊಂಡು ಇರಾಕಿನ ಅಣ್ವಸ ತಾಣಗಳ ಪರಿ ಶೋಧನೆಯ ನಾಟಕ ನಡೆಸಿತು. ಆಗ ಈ ಪರಿಶೋಧನೆಯ ಕಾರ್ಯ ಪೂರ್ಣಗೊಳ್ಳುವ ಮೊದಲೇ ಏಕಾಏಕಿ ನ್ಯಾಟೋ ಪಡೆಗಳನ್ನು ಅಲ್ಲಿ ಕಳುಹಿಸಿ ದಾಳಿ ಮಾಡಿ ಇಡೀ ದೇಶವನ್ನು ಸರ್ವನಾಶ ಮಾಡಿತು. ಸ್ವಾಭಿಮಾನದ ಸಂಕೇತವಾಗಿದ್ದ ಸದ್ದಾಂ ಹುಸೇನ್‌ರನ್ನು ಬಂಸಿ ವಿಚಾರಣೆಯ ಪ್ರಹಸನ ನಡೆಸಿ ಗಲ್ಲಿಗೇರಿಸಿತು. ಅರಬ್ ಜಗತ್ತಿನಲ್ಲಿ ಇರಾಕ್ ಸಿರಿಯ, ಲಿಬಿಯ ಜಾತ್ಯತೀತ ಜನತಾಂತ್ರಿಕ ಆಶಯಗಳ ಮೇಲೆ ರೂಪುಗೊಂಡ ರಾಷ್ಟ್ರಗಳು.ಆ ದೇಶದಲ್ಲಿ ಕಂದಾಚಾರಿಗಳಿಗೆ ಅವಕಾಶವಿರಲಿಲ್ಲ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮಾತ್ರವಲ್ಲ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದ ದೇಶಗಳೆಂದು ಹೆಸರಾಗಿದ್ದವು. ಎಲ್ಲಕ್ಕಿಂತಲೂ ಮುಖ್ಯವಾಗಿ ಅಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿತ್ತು. ಮಹಿಳೆಯರು ಉಪನ್ಯಾಸಕಿಯರಾಗಿ, ನ್ಯಾಯಮೂರ್ತಿ ಗಳಾಗಿ, ವಿಜ್ಞಾನಿಗಳಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದರು. ಗದಾಫಿಯವರದು ಕೂಡಾ ಇದೇ ನಿಲುವು. ಹೀಗಾಗಿ ಮೂಲ ಭೂತವಾದಿ ಶಕ್ತಿಗಳ ವಿರುದ್ಧ ತನ್ನ ಹೋರಾಟ ಎಂಬ ಅಮೆರಿಕದ ಮೊಂಡುವಾದಕ್ಕೆ ಯಾವುದೇ ಕಾರಣ ಇರಲಿಲ್ಲ. ಮೂರನೆ ಜಗತ್ತಿನ ಯಾವುದೇ ದೇಶವಿರಲಿ ಅಲ್ಲಿ ತನ್ನ ಅಸ್ತಿತ್ವಕ್ಕೆ ಅನುಕೂಲವಾಗಿರುವ ಕೈಗೊಂಬೆ ಸರಕಾರಗಳನ್ನು ತಂದು ಕೂರಿಸುವುದು ಅಮೆರಿಕನ್ ಸಾಮ್ರಾಜ್ಯಶಾಹಿಯ ಹುನ್ನಾರವಾಗಿತ್ತು. ಒಮ್ಮೆ ಕೈಗೊಂಬೆ ಸರಕಾರದ ಸ್ಥಾಪನೆ ಯಾದ ನಂತರ ಆ ದೇಶದ ಸಂಪನ್ಮೂಲದ ಮೇಲೆ ಹಿಡಿತ ಸಾಸಿ ಲೂಟಿ ಮಾಡುತ್ತಾ ಬಂದಿರುವುದು ಅದರ ಕರಾಳ ಪರಂಪರೆಯಾಗಿದೆ. ಇಂತಹ ಪಿತೂರಿಗೆ ಈಗ ಲಿಬಿಯ ಬಲಿಯಾಗಿದೆ.ಪಶ್ಚಿಮ ಏಶ್ಯದಲ್ಲಿ ಇಸ್ರೇಲ್ ಎಂಬ ಗೂಂಡಾ ದೇಶವನ್ನು ಸ್ಥಾಪಿಸಿ ಶತಮಾನ ಗಳಿಂದ ಅಲ್ಲಿ ನೆಲೆಸಿದ್ದ ಪೆಲೆಸ್ತೀನಿ ಜನರನ್ನು ಅವರ ಮಾತೃಭೂಮಿಯಿಂದ ಹೊರಗಟ್ಟಿದ ಅಮೆರಿಕ ಶಾಂತಿದೂತ ಎಂದು ಹೆಸರಾಗಿದ್ದ ಪೆಲೆಸ್ತೀನ್ ನಾಯಕ ಯಾಸೆರ್ ಅರಾತ್‌ರ ಅಂತ್ಯಕ್ಕೂ ಇದೇ ರೀತಿ ಕಾರಣವಾಯಿತು. ಈಗ ಕೆಲವು ಅರಬ್ ದೇಶಗಳಲ್ಲಿ ಕಂಡುಬರುತ್ತಿರುವ ಟ್ವಿಟರ್,ಫೇಸ್‌ಬುಕ್ ಇತ್ಯಾದಿ ಕಪಟ ಕ್ರಾಂತಿ ಹಿಂದೆ ವಾಷಿಂಗ್‌ಟನ್‌ನ ಖಳನಾಯಕರ ಚಿತಾವಣೆ ಇದೆ ಎಂಬುದರಲ್ಲಿ ಸಂದೇಹವೇ ಇಲ್ಲ.80ರ ದಶಕದವರೆಗೆ ಸಮಾಜವಾದಿ ಸೋವಿಯತ್ ರಶ್ಯ ಮತ್ತು ಪೂರ್ವ ಯುರೋಪಿನ ಸಮಾಜವಾದಿ ರಾಷ್ಟ್ರಗಳು ಅಮೆರಿಕನ್ ಸಾಮ್ರಾಜ್ಯಶಾಹಿ ಶಕ್ತಿಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದವು. ಹೊಸ ದಾಗಿ ಸ್ವಾತಂತ್ರ ಪಡೆದ ಯಾವುದೇ ದೇಶದ ಮೇಲೆ ಅಮೆರಿಕ ದಾಳಿಗೆ ಮುಂದಾದರೆ ನೇರ ಮಧ್ಯ ಪ್ರವೇಶ ಮಾಡಿ ತಡೆಯು ತ್ತಿದ್ದವು. ಆದರೆ ಈ ಸಾಮ್ರಾಜ್ಯಶಾಹಿ ಶಕ್ತಿಗಳು ಆ ಸಮಾಜವಾದಿ ಜಗತ್ತನ್ನೇ ನಿರ್ನಾಮ ಮಾಡಿದವು. ಆನಂತರ ಜಗತ್ತಿನ ಎಲ್ಲ ಕಡೆ ಈ ದುಷ್ಟಶಕ್ತಿಗಳ ಯಜಮಾನಿಕೆ ನಡೆಯಿತು.
Subscribe to:
Comments (Atom)

